ಗಾಂಜಾ, ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಹೆಬ್ರಿ, ಮೇ 20: ಗಾಂಜಾ ಸೇವನೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಹೆಬ್ರಿ ಪೊಲೀಸರು ಮೂವರು ಆರೋಪಿಗಳನ್ನು ಮೇ 19ರಂದು ಬೆಳಗಿನ ಜಾವ ಬೆಳ್ಳಂಜೆ ಗ್ರಾಮ ತುಂಬೆಜಡ್ಡು ಎಂಬಲ್ಲಿ ಬಂಧಿಸಿದ್ದಾರೆ.
ತೇಜಸ್, ಪ್ರಜ್ವಲ್, ಪ್ರವೀಣ್ ಬಂಧಿತ ಆರೋಪಿಗಳು. ಇವರು ಗಾಂಜಾ ಮಾರಾಟ ಮತ್ತು ಸಂಘಟಿತವಾಗಿ ಕ್ರಿಕೇಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ ರುವುದು ಕಂಡುಬಂದಿದೆ. ಇವರಿಂದ 89,000ರೂ. ನಗದು ಹಣ, 8 ಮೊಬೈಲ್ ಪೋನ್‌ಗಳು, 7 ಎಟಿಎಂ ಕಾರ್ಡಗಳು, 3 ಸಿಮ್ ಕಾರ್ಡಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾವನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





