ಶ್ರಮದಾನದ ಮೂಲಕ ಬಂಕೇರಕಟ್ಟ ಸೇತುವೆ ಹೂಳು ತೆರವು

ಉಡುಪಿ, ಜೂ.1: ಅಂಬಲಪಾಡಿ ಗ್ರಾಮ ಪಂಚಾಯತ್ ಹಾಗೂ ಕಲ್ಮಾಡಿ ನಗರಸಭಾ ವ್ಯಾಪ್ತಿಯ ಗಡು ಭಾಗದಲ್ಲಿರುವ ಬಂಕೇರಕಟ್ಟ ಸೇತುವೆಯ ಕೆಳಭಾಗದಲ್ಲಿ ಸಂಗ್ರಹವಾಗಿ ನೀರು ಸರಾಗ ಹರಿಯಲು ಅಡ್ಡಿಯಾಗಿದ್ದ ಹೂಳನ್ನು ಶ್ರಮದಾನ ನಡೆಸಿ ತೆರವು ಮಾಡಲಾಯಿತು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಲವಾರು ವರ್ಷಗಳಿಂದ ಸೂಕ್ತ ನಿರ್ವಹಣೆಯ ಕೊರತೆ ಯಿಂದ ತುಂಬಿದ್ದ ಹೂಳನ್ನು ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಮಾಡಿ ಟಿಪ್ಪರ್ ವಾಹನದ ಮೂಲಕ ಸ್ಥಳಾಂತರಿಸಲಾಯಿತು. ‘ಈ ಭಾಗದ ಜನತೆಯ ಬೇಡಿಕೆಯಂತೆ ಉದ್ಯಾವರದಿಂದ ಮಲ್ಪೆಭಾಗಕ್ಕೆ ಸಂಪರ್ಕ ಕಲ್ಪಿಸುವ ಬಂಕೇರಕಟ್ಟ ನೂತನ ಸೇತುವೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಮೂಲಕ 5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಯೋಗೀಶ್, ಗ್ರಾಪಂ ಸದಸ್ಯರಾದ ರಾಜೇಶ್ ಪೂಜಾರಿ, ಹರೀಶ್ ಪಾಲನ್, ಪಕ್ಷದ ಪ್ರಮುಖರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಭುವನೇಂದ್ರ, ಜಗದೀಶ್ ಕೋಟ್ಯಾನ್, ವಿವೇಕ್ ಕಲ್ಮಾಡಿ, ಗಿರೀಶ್ ಅಮೀನ್, ರಾಮ್ ರಾಜ್ ಕಿದಿಯೂರು, ಸದಾನಂದ ಜಿ.ಕಾಂಚನ್, ಪಾಂಡು, ಸುಧಾಕರ್ ಪೂಜಾರಿ, ನವೀನ್ ಸುವರ್ಣ, ಶಿವಾಜಿ ಸನಿಲ್, ವಿನಯ್ ಕಲ್ಮಾಡಿ, ಮಂಜು ಕೊಳ, ವಿಜಯ ಕುಂದರ್, ನವೀನ್ ಕಿದಿಯೂರು, ಸದಾನಂದ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.







