ಮಟ್ಕಾ ಜುಗಾರಿ ಪ್ರಕರಣ: ಇಬ್ಬರ ಬಂಧನ

ಶಿರ್ವ, ಜೂ.1: ಮಟ್ಕಾ ಜುಗಾರಿಗೆ ಸಂಬಂಧಿಸಿ ಮಟ್ಕಾ ಕಿಂಗ್ ಪಿನ್ ಸಹಿತ ಇಬ್ಬರನ್ನು ಶಿರ್ವ ಪೊಲೀಸರು ಮೇ 31ರಂದು ಬಂಧಿಸಿದ್ದಾರೆ.
ಮಟ್ಕಾ ಕಿಂಗ್‌ಪಿನ್ ಉಡುಪಿಯ ಲಿಯೋ ಕರ್ನೆಲಿಯೋ ಹಾಗೂ ವಿಠಲ ದೇವಾಡಿಗ ಬಂಧಿತ ಆರೋಪಿ ಗಳು. ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ವಿಠಲ ದೇವಾಡಿಗನನ್ನು ಪೊಲೀಸರು ಬಂಧಿಸಿ, 1,200ರೂ. ನಗದನ್ನು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ವಿಚಾರಿಸಿದಾಗ ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ಎಂಬುದಾಗಿ ವಿಠಲ ದೇವಾಡಿಗ ತಿಳಿಸಿದ್ದು, ಅದರಂತೆ ಲಿಯೋ ಕರ್ನೇಲಿಯೋನನ್ನು ಕೂಡ ಪೊಲೀಸರು ಬಂಧಿಸಿದರು. ಬಳಿಕ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ಹಾಗೂ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿವೆ.
Next Story





