ಗುಜ್ಜರಬೆಟ್ಟು ಭಾಗದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಚಾಲನೆ

ಉಡುಪಿ, ಜೂ.2: ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟುವಿನ ಲಕ್ಷ್ಮೀನಾರಾಯಣ ಭಜನಾ ಮಂದಿರ ಹಾಗೂ ಗುರು ರಾಘವೇಂದ್ರ ಭಜನಾ ಮಂದಿರ ಬಳಿಯ ಕಡಲ್ಕೊರೆತ ಪೀಡಿತ ಭಾಗಗಳಿಗೆ ಶಾಸಕರ ಶಿಫಾರಸಿನ ಮೇರೆಗೆ ಮಂಜೂರಾದ 1 ಕೋಟಿ ರೂ. ವೆಚ್ಚದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಉಡುಪಿ ಶಾಸಕ ಯಶ್ಪಾಲ್
ಸುವರ್ಣ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಕಡಲ್ಕೊರೆತ ಉಂಟಾದ ಗುಜ್ಜರಬೆಟ್ಟು ಭಾಗದ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮೂಲಕ 1 ಕೋಟಿ ರೂ.ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಪಂ ಅಧ್ಯಕ್ಷ ಕುಸುಮ ರವೀಂದ್ರ, ಉಪಾಧ್ಯಕ್ಷ ಅರುಣ್, ಲಕ್ಷ್ಮೀನಾರಾಯಣ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಸುಂದರ ಗುಜ್ಜರಬೆಟ್ಟು, ಕೆಮ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ಪ್ರಶಾಂತ್ ಕೆಮ್ಮಣ್ಣು, ಪುರಂದರ ಕುಂದರ್ ಗುಜ್ಜರಬೆಟ್ಟು, ಸಂಧ್ಯಾ ಕೆಮ್ಮಣ್ಣು, ಧೀರೇಂದ್ರ ನಾಯ್ಕ್ ಬೆಂಗ್ರೆ, ಲೋಕೇಶ್ ಸಾಲ್ಯಾನ್ ಬೆಂಗ್ರೆ, ಪ್ರತಿಭಾ ಭಾಸ್ಕರ್ ಬೆಂಗ್ರೆ, ವತ್ಸಲಾ, ಸ್ಥಳೀಯ ಮುಖಂಡರಾದ ಪ್ರಶಾಂತ್ ಕಾಂಚನ್ ಬೆಂಗ್ರೆ, ಮಾಲತಿ ಶ್ರೀಯಾನ್, ಮುತ್ತಪ್ಪಮೇಸ್ತ್ರಿ, ರವೀಂದ್ರ ಶ್ರೀಯಾನ್, ವಿಶು ಕುಮಾರ್, ರವಿ ಸನಿಲ್ ಹೂಡೆ, ದಿನೇಶ್ ಮೇಸ್ತ್ರಿ, ಗಂಗಾಧರ ಪಾಲನ್, ಶೇಖರ ಶ್ರೀಯಾನ್ ಬೆಂಗ್ರೆ, ರಾಘು ಕುಂದರ್, ಲತೇಶ್ ಗುಜ್ಜರಬೆಟ್ಟು, ಪುರುಷೋತ್ತಮ ಗುಜ್ಜರಬೆಟ್ಟು, ರವಿ ಕುಂದರ್ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.







