ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣ: ಆರೋಪಿ ಬಂಧನ

ಹೆಬ್ರಿ: ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವುಗೈದ ಪ್ರಕರಣದ ಆರೋಪಿ ಯನ್ನು ಹೆಬ್ರಿ ಪೊಲೀಸರು ಜೂ.3ರಂದು ಬಂಧಿಸಿದ್ದಾರೆ.
ದಾವಣಗೆರೆ ಹರಿಹರ ನಿವಾಸಿ ಸಲ್ಮಾನ್(24) ಬಂಧಿತ ಆರೋಪಿ. ಈತ ಜೂ.೩ರಂದು ಬೆಳಗಿನ ಜಾವ ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿಯನ್ನು ಒಡೆದು ಅದರಿಂದ ಸುಮಾರು 2 ರಿಂದ 5 ಸಾವಿರ ರೂ. ವರೆಗಿನ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ದೇವಸ್ಥಾನದ ಧರ್ಮದರ್ಶಿ ಸುಕುಮಾರ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಆರೋಪಿಯ ಸುಳಿವು ಪಡೆದು ಚೆಕ್‌ಪೋಸ್ಟ್ ಮೂಲಕ ನಾಕಬಂದಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Next Story





