ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಗಲಾಟೆ: ಪ್ರಕರಣ ದಾಖಲು

ಕುಂದಾಪುರ: ಕುಂದಾಪುರ ಶಾಸ್ತ್ರಿ ಪಾರ್ಕಿನ ರಿಕ್ಷಾ ನಿಲ್ದಾಣದ ಬಳಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರ ಮಾಚರಣೆ ವೇಳೆ ಪರಸ್ಪರ ಗಲಾಟೆ ಮಾಡಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿರುವವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಸುಶಾಂತ್, ಕಾರ್ತಿಕ್ ಮತ್ತು ರಜತ್ ಹಾಗೂ ಇತರರು ಎಂಬುದಾಗಿ ತಿಳಿದುಬಂದಿದೆ. ಇವರ ವಿರುದ್ಧ ಕುಂದಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.3ರಂದು ರಾತ್ರಿ ವೇಳೆ ಆರ್‌ಸಿಬಿ ಪರ ಸಂಭ್ರಮಾಚರಣೆ ಮಾಡಿದ ಬಳಿಕ ಸಾರ್ವಜನಿಕರು ಅಲ್ಲಿಂದ ಹೋಗಿದ್ದರು. ಜೂ.4ರಂದು ನಸುಕಿನ ವೇಳೆ ಕೆಲವರು ಕುಂದಾಪುರ ಶಾಸ್ತ್ರೀ ಸರ್ಕಲ್‌ನ ಆಟೋ ನಿಲ್ದಾಣದ ಬಳಿ ಜೀಪಿನ ಮೇಲೆ ನಿಂತುಕೊಂಡು ಕಾರಿನ ಸುತ್ತ ಗುಂಪು ಸೇರಿದ್ದರು. ಈ ವೇಳೆ ಸ್ಥಳಕ್ಕೆ ಪೊಲೀಸರು ಬಂದಿದ್ದು ಆಗ ಅಲ್ಲಿ ನಾಲ್ಕೈದು ಜನ ಯುವಕರು ಪರಸ್ಪರ ಮೈ ಕೈ ದೂಡಾಡಿಕೊಂಡು ಗಲಾಟೆ ಮಾಡಿ ಅಶಾಂತಿ ಉಂಟು ಮಾಡುತ್ತಿದ್ದರೆನ್ನ ಲಾಗಿದೆ. ಪೊಲೀಸರನ್ನು ಕಂಡ ಕೆಲವರು ಅಲ್ಲಿಂದ ಜೀಪು ಚಲಾಯಿಸಿಕೊಂಡು ಓಡಿ ಹೋಗಿದರು. ಗಲಾಟೆ ಮಾಡುತ್ತಿದ್ದ ಯುವಕರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕುಂದಾಪುರದ ಸುಶಾಂತ್, ಕಾರ್ತಿಕ್ ಮತ್ತು ರಜತ್ ಹಾಗೂ ಇತರರು ಎಂಬುದಾಗಿ ತಿಳಿದುಬಂದಿದೆ. ಇವರ ವಿರುದ್ಧ ಕುಂದಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





