ಕುಸಿದು ಬಿದ್ದು ಎಲೆಕ್ಟ್ರಿಷಿಯನ್ ಮೃತ್ಯು

ಉಡುಪಿ, ಜೂ.4: ಬೀಡಿನಗುಡ್ಡೆಯಲ್ಲಿರುವ ಕಸವಿಲೇವಾರಿ ಮಾಡುವ ಸ್ಥಳದಲ್ಲಿ ಜೂ.3ರಂದು ಮಧ್ಯಾಹ್ನ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದ ಹಾಸನ ಮೂಲದ ಎಲೆಕ್ಟ್ರಿಷಿಯನ್ ಜಾಹೀದ್ ಇರ್ಫಾನ್ ಶರೀಫ್(57) ಎಂಬವರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





