ಕುಂದಾಪುರ| ಡ್ರಗ್ಸ್ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ, ಜೂ.5: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಜೂ.4ರಂದು ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಬಂಧಿಸಿದ್ದಾರೆ.
ಕಟಪಾಡಿ ಸರಕಾರಿಗುಡ್ಡೆಯ ಮುದಾಸ್ಸಿರ್(23) ಹಾಗೂ ಉದ್ಯಾವರದ ಅಡೆನ್ ಲೋಬೋ(18) ಬಂಧಿತ ಆರೋಪಿಗಳು. ಇವರಿಂದ 2,49,440 ರೂ. ಮೌಲ್ಯದ ಒಟ್ಟು 124.72 ಗ್ರಾಂ ಎಂಡಿಎಂಎ, 9 ಇನ್ಸುಲಿನ್ ಸಿರಿಂಜ್, 2 ವೇಯಿಂಗ್ ಮೇಶಿನ್, ಚೂರಿ, 4540 ರೂ., 3 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





