ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ: ಸಿಪಿಐಎಂ ಖಂಡನೆ

ಉಡುಪಿ, ಜೂ.5: ಆರ್.ಸಿ.ಬಿ. ತಂಡದ ಗೆಲುವಿನ ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುವುದನ್ನು ರಾಜ್ಯ ಸರಕಾರ ಅಂದಾಜಿಸಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲ್ಲದ ಪರಿಣಾಮ ಭದ್ರತಾ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿ 11 ಜನರ ಸಾವು ಮತ್ತು ಹಲವಾರು ಮಂದಿ ಗಂಭೀರವಾದ ಸ್ಥಿತಿಗೆ ದೂಡುವಂತೆ ಮಾಡಿರುವುದನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಇದು ರಾಜ್ಯ ಗೃಹ ಇಲಾಖೆಯ ವೈಫಲ್ಯವಾಗಿದೆ. ಘಟನೆಯಲ್ಲಿನ ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚಗಳು ಮತ್ತು ಆರೈಕೆ ಅವಧಿಯ ವೆಚ್ಚಗಳನ್ನು ಹಾಗೂ ಮೃತ ವ್ಯಕ್ತಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ರಾಜ್ಯ ಸರಕಾರ ಹಾಗೂ ಆರ್.ಸಿ.ಬಿ. ಫ್ರಾಂಚೈಸಿ ಮಾಲಿಕರು ಘೋಷಿಸಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





