ಕುಂದಾಪುರ| ಮಹಿಳೆ ನಾಪತ್ತೆ: ನದಿ ಸಮೀಪ ಸ್ಕೂಟಿ ಪತ್ತೆ

ಕುಂದಾಪುರ : ಮನೆಯಿಂದ ನಾಪತ್ತೆಯಾದ ಮಹಿಳೆಯ ಸ್ಕೂಟಿ ಕೋಡಿಯ ಸೇತುವೆ ಮೇಲಿನಿಂದ ಸಿಕ್ಕಿದ್ದ ಘಟನೆ ಸೋಮವಾರ ಸಂಭವಿಸಿದೆ.
ಕುಂದಾಪುರದ ಪುರಸಭೆ ವ್ಯಾಪ್ತಿಯ ವಿಠಲವಾಡಿಯ ನಿವಾಸಿ ಹೀನಾ ಕೌಸರ್ (32) ನಾಪತ್ತೆಯಾದ ಮಹಿಳೆ ಎಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟು ಬಂದ ಅವರು, ಸ್ಕೂಟಿಯನ್ನು ಸೇತುವೆಯ ಮೇಲಿಟ್ಟು, ನದಿಗೆ ಹಾರಿರಬಹುದು ಎನ್ನಲಾಗಿದೆ. ಸ್ಕೂಟಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬೆಳಗ್ಗೆಯಿಂದ ಸಂಜೆಯವರೆಗೂ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬಂದಿಯಿಂದ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ಕಾರ್‍ಯಾಚರಣೆ ನಡೆಯಿತು. ಆದರೆ ಸಂಜೆಯವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
Next Story