ಅಂಬಲಪಾಡಿ ಬಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಮಂತ್ ಶೆಟ್ಟಿಗಾರ್

ಸುಮಂತ್ ಶೆಟ್ಟಿಗಾರ್
ಉಡುಪಿ: ಅಂಬಲಪಾಡಿ ೪೯ನೇ ವರ್ಷದ ಬಾಲ ಗಣೇಶೋತ್ಸವ ಸಮಿತಿಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಮಂತ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ರವಿವಾರ ಅಂಬಲಪಾಡಿಯಲ್ಲಿ ಸಮಿತಿ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾಗಿ ನಿತೇಶ್ ಶೆಟ್ಟಿ ಕಪ್ಪೆಟ್ಟು, ಕಾರ್ಯ ದರ್ಶಿಯಾಗಿ ಅಜಿತ್ ಕಪ್ಪೆಟ್ಟು, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ಮಡಿವಾಳ, ಕೋಶಾಧಿಕಾರಿಯಾಗಿ ಅವಿನಾಶ್ ಆಚಾರ್ಯ ಅಂಬಲಪಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಕೆ.ಅಂಬಲಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಎಂ.ರಾಧಾಕೃಷ್ಣ ಪೈ ಅಂಬಾಗಿಲು, ಕೀರ್ತಿ ಶೆಟ್ಟಿ, ಸಂದೇಶ್ ಉಚ್ಚಿಲ್, ಪವನ್ ಕುಮಾರ್ ಶೆಟ್ಟಿ, ಜಗದೀಶ್ ಶೆಟ್ಟಿಗಾರ್, ಮಹೇಶ್ ಆಚಾರ್ಯ, ಶ್ರೀಪತಿ ಆಚಾರ್ಯ, ನಿಖಿಲ್ ಶೆಟ್ಟಿಗಾರ್, ಹರೀಶ್ ಕುಂಜಗುಡ್ಡೆ, ಅನಿಲ್ ಅಂಬಲಪಾಡಿ, ಸದಾನಂದ್ ಮೆಂಡನ್, ಯೋಗೀಶ್ ಶೆಟ್ಟಿ ಅಂಬಲಪಾಡಿ, ಹರೀಶ್ ಪಾಲನ್ ಕಪ್ಪೆಟ್ಟು, ಸತೀಶ್ ರಾವ್, ರಂಜಿತ್ ಶೆಟ್ಟಿ, ಶಿವರಾಮ್ ಸುವರ್ಣ, ಲಕ್ಷ್ಮಣ ಕುಂಜಗುಡ್ಡೆ, ಶ್ರೀಕಾಂತ್ ಶೆಟ್ಟಿ, ಉಮೇಶ್ ಶೆಟ್ಟಿಗಾರ್, ಹರೀಶ್ ಶೆಟ್ಟಿ ಕಪ್ಪೆಟ್ಟು, ಪ್ರತಾಪ್ ಕಪ್ಪೆಟ್ಟು ಆಯ್ಕೆಯಾಗಿದ್ದಾರೆ.