ಡಾ.ಜಿ.ಎಲ್.ಹೆಗಡೆ, ಈಶ್ವರ ಭಟ್ಗೆ ಕಲಾರಂಗದ ಯಕ್ಷ ಅರ್ಥಧಾರಿ ಪ್ರಶಸ್ತಿ

ಡಾ.ಜಿ.ಎಲ್.ಹೆಗಡೆ - ಈಶ್ವರ ಭಟ್
ಉಡುಪಿ, ಜೂ.10: ಉಡುಪಿ ಯಕ್ಷಗಾನ ಕಲಾರಂಗವು ಕಲಾಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮ ವಾಗಿ ಅರ್ಥಧಾರಿ, ಹವ್ಯಾಸಿ ವೇಷಧಾರಿ, ಸಂಘಟಕ ಡಾ.ಜಿ.ಎಲ್. ಹೆಗಡೆ ಹಾಗೂ ಅರ್ಥಧಾರಿ, ಹವ್ಯಾಸಿ ಕಲಾವಿದ ಸಪರ್ಂಗಳ ಈಶ್ವರ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 20,000ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.
ಮುಂದಿನ ಜುಲೈ 12ರ ಶನಿವಾರದಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ತಾಳಮದ್ದಲೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story