ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು

ಉಡುಪಿ, ಜೂ.10: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲೂರಿನ ಜ್ಯೋತಿ ಲತಾ ಲೊಬೋ(50) ಎಂಬವರು ನಾರ್ವೆ ವೀಸಾವನ್ನು ಪಡೆಯಲು ಮುಂಬಯಿಯ ಲ್ಲಿರುವ ಏಜೆಂಟ್ ಸ್ಟ್ಯಾನ್ಲಿ ಡಿಸೋಜ ಎಂಬಾತನಲ್ಲಿ ಕಳೆದ ನವೆಂಬರನಲ್ಲಿ ಮಾತುಕತೆ ಮಾಡಿದ್ದು, ಅದರಂತೆ ಜ್ಯೋತಿ ಒಟ್ಟು 4ಲಕ್ಷ ರೂ. ಹಣವನ್ನು ಸ್ಟ್ಯಾನ್ಲಿ ಡಿಸೋಜ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಯು ಜ್ಯೋತಿಗೆ ನಾರ್ವೆ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4 ಲಕ್ಷ ಹಣವನ್ನು ಪಡೆದು ವಂಚಿಸಿದ್ದಾನೆ ಎಂದು ದೂರಲಾಗಿದೆ.
Next Story