ಕುಂದಾಪುರ: ಯುವಕ ನಾಪತ್ತೆ

ಕುಂದಾಪುರ: ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ನಿವಾಸಿ ಸಾಹಿಲ್ (27) ಎಂಬುವವರು ಜೂ. 8 ರಿಂದ ನಾಪತ್ತೆಯಾಗಿದ್ದಾರೆ.
ಜೂ. 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಸಹೋದರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.6 ಎತ್ತರವಿರುವ ಸಾಹಿಲ್, ಬಿಳಿ ಬಣ್ಣದ ಕಂದು ಗೆರೆ ಇರುವ ತುಂಬು ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಗೋದಿ ಮೈ ಬಣ್ಣ, ಸಾಧರಣ ಶರೀರ ಹೊಂದಿದ್ದು ಕನ್ನಡ, ಉರ್ದು, ಹಿಂದಿ, ಬ್ಯಾರಿ ಭಾಷೆ ಮಾತಾಡುತ್ತಾರೆ.
Next Story