ಕುಂದಾಪುರ: ಮಹಿಳೆ ನಾಪತ್ತೆ

ಕುಂದಾಪುರ: ಇಲ್ಲಿನ ವಿಠಲವಾಡಿ ನಿವಾಸಿ ಹೀನಾ ಕೌಸರ್(32) ಎನ್ನುವರು ಮನೆಯಿಂದ ಸ್ಕೂಟಿಯಿಂದ ತೆರಳಿದವರು ಮನೆಗೆ ವಾಪಾಸ್ ಆಗದೆ ಕಾಣೆಯಾಗಿದ್ದಾರೆ. ಇವರ ಸ್ಕೂಟಿ ಕುಂದಾಪುರ-ಕೋಡಿ ಸೇತುವೆ ಬಳಿ ಸೋಮವಾರ ಸಂಜೆ ಪತ್ತೆಯಾಗಿದ್ದು ಅಗ್ನಿಶಾಮಕದಳ, ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ನದಿಯಲ್ಲಿ ಸತತ ಹುಡುಕಾಟ ನಡೆಸಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ: ಹೀನಾ ಕೌಸರ್ ಅವರು 5.4 ಅಡಿ ಎತ್ತರ. ಬಿಳಿ ಬಣ್ಣದ ಗೌನ್ ಧರಿಸಿದ್ದು ಗೋದಿ ಮೈ ಬಣ್ಣ, ಸದೃಡ ಶರೀರದವರಾಗಿದ್ದಾರೆ.
Next Story