ಉಡುಪಿ: ಕೇಂದ್ರ ಸಚಿವ ಸೋಮಣ್ಣ ಪ್ರವಾಸ ರದ್ದು

ಉಡುಪಿ, ಜೂ.12: ಶುಕ್ರವಾರ ಜೂ.13ರಂದು ನಿಗದಿಯಾಗಿದ್ದ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರ ಉಡುಪಿ ಪ್ರವಾಸ ರದ್ದಾಗಿದೆ.
ಸಚಿವರು ಉಡುಪಿ ಇಂದ್ರಾಳಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ, ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ನಿಲ್ದಾಣಕ್ಕೆ ಭೇಟಿಯಿತ್ತು 60 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನವೀಕರಣ ಗೊಂಡ ಕುಂದಾಪುರ ರೈಲ್ವೇ ಸ್ಟೇಷನ್‌ನ ಪ್ಲಾಟ್ ಫಾರ್ಮ್, ನೂತನ ಛಾವಣಿ ಮತ್ತು ಉದ್ಯಾನವನವನ್ನು ಉದ್ಘಾಟಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅನಿವಾರ್ಯ ಕಾರ್ಯಕ್ರಮದ ನಿಮಿತ್ತ ಸಚಿವರ ಉಡುಪಿ ಪ್ರವಾಸ ರದ್ದಾಗಿದ್ದು ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





