ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಕೋಟ, ಜೂ.12: ಜೂ.10ರಂದು ಸಂಜೆ 6:30ರ ಸುಮಾರಿಗೆ ಕೊಕ್ಕರ್ಣೆ ಹೊಳೆಯಲ್ಲಿ ಸ್ನೇಹಿತರ ಜೊತೆ ಗಾಳ ಹಾಕುತ್ತಿರುವಾಗ ಅಕಸ್ಮಿಕವಾಗಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ನಾಲ್ಕೂರು ಗ್ರಾಮದ ಗಣೇಶ (25) ಎಂಬ ಯುವಕನ ಮೃತದೇಹ ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಕೋಟ ಠಾಣಾ ವ್ಯಾಪ್ತಿಯ ಕೋಡಿ ತಲೆಯಲ್ಲಿ ಹೊಳೆಯಲ್ಲಿ ಪತ್ತೆಯಾಗಿದೆ.
ಜೂ.10ರಂದು ಗಣೇಶನ ಸ್ನೇಹಿತರು ಹಾಗೂ ಮನೆಯವರು ಹುಡುಕಾಡಿ ಸಿಗದಿದ್ದಾಗ ಬ್ರಹ್ಮಾವರ ಠಾಣೆಯಲ್ಲಿ ನಾಪತ್ತೆ ದೂರು ನೀಡಿ ಕೇಸು ದಾಖಲಾಗಿತ್ತು. ಇಂದು ಬೆಳಗ್ಗೆ ಕೋಡಿ ತಲೆಯಲ್ಲಿ ಪತ್ತೆಯಾದ ದೇಹ ಗಣೇಶ್ ಅವರದೇ ಎಂದು ಮನೆಯವರು ಗುರುತಿಸಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





