ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದಿಂದ ಅಭಿನಂದನೆ

ಉಡುಪಿ, ಜೂ.13: ಉಡುಪಿ ಎಂಜಿಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತರಿಗೆ ಉಡುಪಿ ತುಳುಕೂಟದ ವತಿಯಿಂದ ಗುರುವಾರ ಉಡುಪಿ ಹೋಟೆಲ್ ಡಯಾನದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಇತ್ತೀಚಿಗೆ ವೃತ್ತಿಯಿಂದ ನಿವೃತ್ತರಾದ ತುಳುಕೂಟದ ಸದಸ್ಯ ಜಯರಾಂ ಮಣಿಪಾಲ ಅವರನ್ನು ಸಂಮಾನಿಸಲಾಯಿತು
ಈ ಸಂದರ್ಭದಲ್ಲಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗೌರಾವಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ ಕಿದಿಯೂರ್, ಕೋಶಾಧಿಕಾರಿ ಚೈತನ್ಯ ಎಂ.ಜಿ., ವಿವೇಕಾನಂದ ಹಾಗು ಪ್ರಭಾಕರ ಭಂಡಾರಿ, ಉದ್ಯಮಿ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
Next Story





