ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಯೋಗ ಎಸ್ಪಿ ಭೇಟಿ

ಉಡುಪಿ, ಜೂ.16: ಉಡುಪಿ ಜಿಲ್ಲಾ ನೂತನ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರನ್ನು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ -ಸಮಾದಾನ ಹಾಗೂ ಭಾವೈಕ್ಯತೆ ಸದಾ ನೆಲೆ ನಿಲ್ಲಬೇಕು. ವಕ್ಫ್ ಬಗ್ಗೆ ಇರುವ ತಪ್ಪುಭಾವನೆಗಳನ್ನು ಹೊಗಲಾಡಿಸುವಲ್ಲಿ ತಾವು ಮುಂದಾಗ ಬೇಕು. ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ವಕ್ಫ್ ನಿಯೋಗ ವರಿಷ್ಠಾಧಿಕಾರಿ ಯವರಿಗೆ ಮಾನವಿ ಮಾಡಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸಿ.ಎಚ್. ಅಬ್ದುಲ್ ಮುತ್ತಲಿ ವಂಡ್ಸೆ, ಉಪಾಧ್ಯಕ್ಷ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ಸಲಹಾ ಸಮಿತಿ ಸದಸ್ಯರಾದ ಮನ್ಸೂರ್ ಮರವಂತೆ ಉಪಸ್ಥಿತರಿದ್ದರು.
Next Story





