ಉಡುಪಿ ಸುನ್ನಿ ಕೋ-ಆರ್ಡಿನೇಷನ್ ಸಮಿತಿ ಅಧ್ಯಕ್ಷರಾಗಿ ಕಲ್ಕಟ್ಟ ರಝ್ವಿ

ಉಡುಪಿ, ಜೂ.17: ಸುನ್ನೀ ಸಂಘಟನೆಗಳ ಒಕ್ಕೂಟ ಸುನ್ನಿ ಕೋ ಆರ್ಡಿನೇಷನ್ ಸಮಿತಿಯ ಪುನರ್ ರಚನೆ ಸಭೆಯು ಮಣಿಪಾಲ ಇನ್ ಹೊಟೇಲ್‌ನಲ್ಲಿ ಇತ್ತೀಚೆಗೆ ಜರಗಿತು.
ಕೋ-ಓಡಿನೇಶನ್ ಸಮಿತಿಯ ಅಧ್ಯಕ್ಷ ಜಿಲ್ಲಾ ಸಹಾಯಕ ಖಾಝಿ ಅಬ್ದುರ‌್ರಹ್ಮಾನ್ ಮದನಿ ಮೂಳೂರು ನೇತೃತ್ವದಲ್ಲಿ ಜರಗಿದ ಸಭೆಯನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್ ಕೋಟೇಶ್ವರ ಉದ್ಘಾಟಿಸಿ ದರು. ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಳ್ ದುವಾ ನೆರವೇರಿಸಿದರು.
ಮೌಲಾನಾ ಮುಸ್ತಫ ಸಅದಿ ಮೂಳೂರು, ಹಾಫೀಝ್ ಸಾಧಿಕ್ ರಝ್ವಿ ಉಪ್ಪಳ, ಸಾಬೀರ್ ಸಅದಿ ಮೂಳೂರು ಶುಭ ಹಾರೈಸಿದರು. ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ಸಂಘಟನೆಯ ಉದ್ದೇಶವನ್ನು ವಿವರಿಸಿದರು. ಸುನ್ನೀ ಕೋ-ಓಡಿನೇಶನ್ ಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಖಾಝಿ ಮಾಣಿ ಉಸ್ತಾದ್, ಮುಫ್ತಿ ಬದ್ರುದ್ದೀನ್ ಮಿಸ್ಬಾಹಿ ಬೆಳವಾಯಿ, ಕಾಪು ಖಾಝಿ ಅಹ್ಮದ್ ಖಾಸಿಮಿ, ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್ ಕೋಟೇಶ್ವರ, ಬಿ.ಕೆ.ಅಬ್ದುರ‌್ರಹ್ಮಾನ್ ಮದನಿ ಮೂಳೂರು, ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಾಟ್ಟೆ, ಮೌಲಾನ ಶೌಕತ್ ರಝಾ ಶಾಂತಿನಗರ, ಮೌಲಾನ ಫಝೀಲತ್ ಹುಸೈನ್ ಕೋಟೇಶ್ವರ, ಹಾಫೀಝ್ ಸಾಧಿಕ್ ರಝ್ವಿ, ಹಾಜಿ ಪಿ.ಅಬೂಬಕ್ಕರ್ ನೇಜಾರು, ಬಿಎಸ್‌ಎಫ್ ಮುಹಮ್ಮದ್ ರಫೀಕ್, ಸಯ್ಯಿದ್ ಫರೀದ್ ಸಾಹೇಬ್ ಉಡುಪಿ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಯಾಗಿ ಎಚ್.ಸುಭಾನ್ ಅಹ್ಮದ್ ಹೊನ್ನಾಳ, ಕೋಶಾಧಿಕಾರಿಯಾಗಿ ವಸೀಮ್ ಭಾಷಾ ಕುಂದಾಪುರ, ಸಂಘಟನಾ ಕಾರ್ಯದರ್ಶಿ ಯಾಗಿ ಹುಸೈನ್ ಸಅದಿ ಹೊಸ್ಮಾರು, ಉಪಾಧ್ಯಕ್ಷರುಗಳಾಗಿ ಸಾಬಿರ್ ಸಅದಿ ಮೂಳೂರು, ಮೌಲಾ ಅಲಿ ರಝ್ವಿ ಉಡುಪಿ, ಅಬ್ದುಲ್ ಹಮೀದ್ ಅದ್ದು ಮೂಳೂರು, ಬಿಎ ಮೊಹಿದ್ದೀನ್ ಕಟಪಾಡಿ, ಹುಸೈನ್ ಮೋನು ಪಡುಕೆರೆ, ಕಾರ್ಯದರ್ಶಿಗಳಾಗಿ ಅಡ್ವೋಕೇಟ್ ಹಂಝತ್ ಹೆಜಮಾಡಿ, ಎಂಕೆ ಇಬ್ರಾಹಿಂ ಮಜೂರು, ಅಡ್ವೊಕೇಟ್ ಕೆಎಂ ಇಲ್ಯಾಸ್ ನಾವುಂದ, ಇಲ್ಯಾಸ್ ಕಟಪಾಡಿ, ನಾಸಿರ್ ಶೇಖ್ ಕಾರ್ಕಳ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ಅಸ್ಸಯ್ಯಿದ್ ಜುನೈದ್ ಅರ್ರಿಫಾಯೀ ತಂಳ್, ಮುಸ್ತಫ ಸಆದಿ ಮೂಳೂರು, ಸುಲೈಮಾನ್ ಸಅದಿ, ಅಶ್ರಫ್ ಫುರ್ಖಾನಿ, ಮೌಲಾನಾ ಫಯಾಜ್ ಮಂಚಕಲ್, ಸಲೀಂ ಪಕೀರನಕಟ್ಟೆ, ಅಬ್ದುಲ್ ರಝಾಕ್ ಮದದಿ ಉಡುಪಿ, ಅಬ್ದುಲ್ ರಶೀದ್ ಸಖಾಫಿ ಮಜೂರ್, ಅಬ್ದುಲ್ ಹಮೀದ್ ಮದನಿ, ಅಬ್ದುಲ್ ಮಜೀದ್ ಹನೀಫಿ, ಬಶೀರ್ ಅಲಿ ಮೂಳೂರು, ಶಾಹುಲ್ ಹಮೀದ್ ನಯೀಮಿ, ಮುಸ್ತಫ ಸಖಾಫಿ, ಇರ್ಷಾದ್ ಸಾಹೇಬ್ ಬಸ್ರೂರು, ಝುಂ ಝುಂ ಕಲಂದರ್ ಹೂಡೆ, ಜುನೈದ್ ಹೂಡೆ, ಮೊಹಮ್ಮದ್ ಗೌಸ್ ಮಿಯಾರ್, ಅಮೀರ್ ಖಾನ್ ಅಹ್ಸನಿ, ಮುಹಮ್ಮದ್ ನಯೀಮ್ ಕಟಪಾಡಿ, ಅಬ್ದುಸ್ಸಲಾಂ ಸಅದಿ, ಅಬ್ದುಲ್ ಹಮೀದ್ ಮದನಿ, ಹನೀಫ್ ಅಂಬಾಗಿಲು, ಶಬೀರ್ ಸಖಾಫಿ ಉಚ್ಚಿಲ, ಅಬ್ದುಲ್ಲತೀಫ್ ಫಾಳಿಲಿ ನಾವುಂದ, ರವೂಫ್ ಖಾನ್ ಮೂಡಗೋಪಾಡಿ, ಶಾಬಾನ್ ಹಂಗಳೂರು, ಅಶ್ರಫ್ ಹೂಡೆ, ಬಶೀರ್ ಮುಸ್ಲಿಯಾರ್ ಹಾಗೂ ರಖೀಬ್ ಕನ್ನಂಗಾರು ರವರನ್ನು ಆಯ್ಕೆ ಮಾಡಲಾಯಿತು.







