ಹೊಳೆಗೆ ಹಾರಿದ ನಿವೃತ್ತ ಶಿಕ್ಷಕ ನಾಪತ್ತೆ

ಕೊಲ್ಲೂರು, ಜೂ.17: ನಿವೃತ್ತ ಶಿಕ್ಷಕರೊಬ್ಬರು ವಂಡ್ಸೆಯ ಚಕ್ರಾ ಹೊಳೆಗೆ ಹಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವ ಘಟನೆ ಜೂ.16ರಂದು ಮಧ್ಯಾಹ್ನ ವೇಳೆ ನಡೆದಿದೆ.
ವಂಡ್ಸೆ ಶಾಲೆಯಲ್ಲಿ ಶಿಕ್ಷಕರಾಗಿ ಇದೀಗ ನಿವೃತ್ತರಾಗಿರುವ ಕುಕ್ಕೆಹಳ್ಳಿ ಗ್ರಾಮದ ಸರ್ವೋತ್ತಮ(79) ಎಂಬವರು ಬೆಳಗ್ಗೆ ಮನೆಯಲ್ಲಿ ಯಾರಿಗೂ ತಿಳಿಸದೇ ಹೋಗಿದ್ದು, ಹುಡುಕಾಟ ನಡೆಸಿದಾಗ ಇವರು ವಂಡ್ಸೆ ಎಂಬಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಬಂತು.
ಅಲ್ಲಿ ನೋಡಿದಾಗ ಅವರಿಗೆ ಸೇರಿದ ಚಪ್ಪಲಿ, ವಾಚ್, ಬಸ್ ಟಿಕೆಟ್, ಹಾಗೂ ಮೊಬೈಲ್ ವಂಡ್ಸೆ ಸೇತು ವೆಯ ಬಳಿ ಸಿಕ್ಕಿದ್ದು, ಸರ್ವೋತ್ತಮ ಹೆಗ್ಡೆ ವಂಡ್ಸೆಯ ಚಕ್ರಾ ಹೊಳೆಗೆ ಹಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಕೊಂಡು ಹೋಗಿ ನಾಪತ್ತೆಯಾಗಿರಬಹುದು ಅಥವಾ ಅವರು ತನಗೆ ಸೇರಿದ ಈ ಎಲ್ಲ ಸೊತ್ತುಗಳನ್ನು ಇಲ್ಲಿಯೇ ಬಿಟ್ಟು ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





