ಅಜೆಕಾರು ಕೊಲೆ ಪ್ರಕರಣ: ಆರೋಪಿ ಪ್ರತಿಮಾಗೆ ಜಾಮೀನು

ಕಾರ್ಕಳ, ಜೂ.17: ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದ ಬಾಲಕೃಷ್ಣ ಪೂಜಾರಿ (44) ಅವರ ಕೊಲೆ ಪ್ರಕರಣದ ಆರೋಪಿ ಮೃತರ ಪತ್ನಿ ಪ್ರತಿಮಾ(36)ಗೆ ರಾಜ್ಯ ಹೈಕೋರ್ಟ್ ಶರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಮೃತ ಬಾಲಕೃಷ್ಣ ಪೂಜಾರಿಯ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರು ಸೇರಿ ಅ.20ರಂದು ಈ ಕೊಲೆ ಎಸಗಿದ್ದರು. ಇವರನ್ನು ಅಜೆಕಾರು ಪೊಲೀಸರು ಅ.25ರಂದು ಬಂಧಿಸಿದ್ದರು.
ಇದೀಗ ರಾಜ್ಯ ಹೈಕೋರ್ಟ್ ಪ್ರಕರಣದ ಪರಿಶೀಲನೆಯ ನಂತರ, ಪ್ರತಿಮಾಳಿಗೆ ನಿಗದಿತ ಷರತ್ತು ಗಳೊಂದಿಗೆ ಜಾಮೀನು ನೀಡಿದೆ. ಕಳೆದ ಕೆಲವು ತಿಂಗಳ ಹಿಂದೆ ಇನ್ನೋರ್ವ ಆರೋಪಿ ದಿಲೀಪ್ ಹೆಗ್ಡೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು.
Next Story





