ಇಂದಿರಾ ಕ್ಯಾಂಟಿನ್‌ನಲ್ಲಿ ರಾಹುಲ್‌ಗಾಂಧಿ ಹುಟ್ಟುಹಬ್ಬ ಆಚರಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ, ಜೂ.19: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ನೇತೃತ್ವದಲ್ಲಿ ಗುರುವಾರ ಮಣಿಪಾಲದ ಇಂದಿರಾ ಕ್ಯಾಂಟಿನ್‌ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಉಪಹಾರ ಸೇವಿಸುವ ಮೂಲಕ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ವಿಶಿಷ್ಠವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಎಂ. ಎ. ಗಫೂರ್, ರಾಹುಲ್ ಗಾಂಧಿ ಅವರು ಸದಾ ಸತ್ಯದ ಮೂಲಕ ಬಿಜೆಪಿಯ ಸುಳ್ಳಿನ ವಿರುದ್ದ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸದಾ ತಮ್ಮ ಕಾಳಜಿ ವ್ಯಕ್ತಪಡಿಸುತಿದ್ದು, ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಿಕೊಂಡು ಬಂದಿದ್ದಾರೆ ಎಂದರು.
ಕಾಲ್ನಡಿಗೆ ಮೂಲಕ ದೇಶದಾದ್ಯಂತ ಸಂಚಾರ ಮಾಡಿ ದ್ವೇಷವನ್ನು ಅಳಿಸಿ ಪ್ರೀತಿಯ ಸಂದೇಶವನ್ನು ಪ್ರಚಾರ ಮಾಡುವ ಬಹುದೊಡ್ಡ ಕೆಲಸವನ್ನು ರಾಹುಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಚುಕ್ಕಾಣಿ ಯನ್ನು ಹಿಡಿಯಲಿ ಎಂಬುದು ದೇಶದ ಪ್ರತಿಯೊಬ್ಬ ನಾಗರಿಕನ ಹಾರೈಕೆ ಯಾಗಿದೆ ಎಂದು ಗಫೂರ್ ತಿಳಿಸಿದರು.
ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಡವರ ಹಸಿವನ್ನು ನೀಗಿಸಲು ಆರಂಭಿಸಿದ ಮಣಿಪಾಲದ ಈ ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿ ದಿನ ಬೆಳಿಗ್ಗೆ ಸುಮಾರು 350 ಮಂದಿ ಬೆಳಗಿನ ಉಪಹಾರ ಮತ್ತು 400 ಮಂದಿ ಅಪರಾಹ್ನದ ಊಟವನ್ನು ಸೇವಿಸುತ್ತಿದ್ದಾರೆ. ಇಂತಹ ಉತ್ತಮ ಯೋಜ ನೆಗೆ ಇನ್ನಷ್ಟು ಪ್ರಚಾರ ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿಯ ರಿಕ್ಷಾ ಚಾಲಕರೊಂದಿಗೆ ಸೇರಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಮೀನುಗಾರ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಎನ್ ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಮುಖಂಡರಾದ ಮುರಳಿ ಶೆಟ್ಟಿ, ಅಮೃತ್ ಶೆಣೈ, ಸುಕೇಶ್ ಆಚಾರ್ಯ, ಮಹಮ್ಮದ್, ನವೀನ್ ಸಾಲಿಯಾನ್, ಯಾದವ ಅಮೀನ್, ಸದಾನಂದ ಮೂಲ್ಯ ಸತೀಶ್ ಕೊಡವೂರು, ರಮೇಶ್ ತಿಂಗಳಾಯ, ರಾಮಪ್ಪ ಸಾಲಿಯಾನ್, ರೋಶನ್ ಶೆಟ್ಟಿ, ಪ್ರದೀಪ್ ಸ್ಯಾಮುವೆಲ್, ಅಬುಬಕ್ಕರ್ ಖಾಸಿಂ, ರಹೀಮ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.








