ನಾಪತ್ತೆಯಾದ ವೃದ್ಧರ ಮೃತದೇಹ ಪತ್ತೆ

ಗಂಗೊಳ್ಳಿ, ಜೂ.19: ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಹೊಸಕಟ್ಟೆ ಮನೆಯಿಂದ ಜೂ.16ರಂದು ನಾಪತ್ತೆಯಾಗಿ ವಂಡ್ಸೆಯ ಸೇತುವೆ ಮೇಲೆ ಅವರಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾದ ನಿವೃತ್ತ ಶಿಕ್ಷಕ ಸರ್ವೋತ್ತಮ ಹೆಗ್ಡೆ (79) ಅವರ ಮೃತದೇಹ ಜೂ.18ರಂದು ಅಪರಾಹ್ನ ಗಂಗೊಳ್ಳಿ ಗ್ರಾಮದ ಪಂಚಗಂಗಾವಳಿ ನದಿಯ ದಡದಲ್ಲಿ ಪತ್ತೆಯಾಗಿದೆ.
ಅವರು ಯಾವುದೋ ವಿಷಯಕ್ಕೆ ಮನನೊಂದು ಕುಕ್ಕೆಹಳ್ಳಿಯಿಂದ ವಂಡ್ಸೆಗೆ ಬಂದು ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





