ಬ್ರಹ್ಮಾವರ: ಸಹಕಾರಿ ಸಂಘದ ಕಚೇರಿಯಲ್ಲಿ ಕಳವು

ಬ್ರಹ್ಮಾವರ, ಜೂ.20: ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಹಣಾರಬೆಟ್ಟುನಲ್ಲಿರುವ ಪ್ರಧಾನ ಕಛೇರಿಗೆ ಕಳ್ಳರು ನುಗ್ಗಿರುವ ಬಗ್ಗೆ ವರದಿಯಾಗಿದೆ.
ಜೂ.18ರಂದು ರಾತ್ರಿ ಕಛೇರಿಯ ಮುಖ್ಯದ್ವಾರದ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಚೇರಿಯ ಟೇಬಲ್, ಡ್ರಾವರ್‌ಗಳನ್ನು ಹುಡುಕಾಡಿ ಡ್ರಾವರ್‌ನಲ್ಲಿದ್ದ ಕಛೇರಿಯ 7,000ರೂ. ಮೌಲ್ಯದ ಮೊಬೈಲ್ ಹಾಗೂ ಸಿಮ್ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





