ಉಡುಪಿ: ಗಾಳಿ-ಮಳೆಗೆ ಮೂರು ಮನೆಗಳಿಗೆ ಹಾನಿ

ಉಡುಪಿ, ಜೂ.20: ಗಾಳಿ-ಮಳೆಯಿಂದಾಗಿ ಮರಬಿದ್ದು ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಮೂರು ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಸುಮಾರು 70,000ರೂ. ನಷ್ಟ ಸಂಭವಿಸಿದ ವರದಿ ಬಂದಿದೆ.
ಆಲೂರು ಗ್ರಾಮದ ಸೀತು ಎಂಬವರ ಮನೆ ಮೇಲೆ ಮರ ಬಿದ್ದು 30ಸಾವಿರ ರೂ., ಮಚ್ಚಟ್ಟು ಗ್ರಾಮದ ವಿಶಾಲ ಬೋವಿ ಎಂಬವರ ಮನೆ ಮೇಲೆ ಮರ ಬಿದ್ದು 20,000ರೂ. ಹಾಗೂ ಅದೇ ಗ್ರಾಮದ ಪುಟ್ಟ ಬೋವಿ ಎಂಬವರ ಮನೆಗೆ 15,000ರೂ. ನಷ್ಟ ಸಂಭವಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
Next Story





