ಗೋಕಳ್ಳತನ ಪ್ರಕರಣ: ಓರ್ವ ಆರೋಪಿ ಬಂಧನ
ಕಾರ್ಕಳ, ಜೂ.21: ಬಜಗೋಳಿಯ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್‌ನ ಹಟ್ಟಿಯಲ್ಲಿರುವ 3 ದನಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದರೆ ಕಲ್ಲಬೆಟ್ಟು ನಿವಾಸಿ ಸಲೀಂ(38) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳ ಭಾಗಿಯಾಗಿದ್ದು, ಅವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.
ಇವರು ಜೂ.16ರಂದು ಟ್ರಸ್ಟ್‌ನ ಹಟ್ಟಿಯಲ್ಲಿದ್ದ 10ಸಾವಿರ ರೂ. ಮೌಲ್ಯದ ಮೂರು ದನಗಳನ್ನು ವಾಹನ ದಲ್ಲಿ ಬಂದು ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story





