ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ: ಕೋಟ

ಉಡುಪಿ, ಜೂ.22: ಯುಪಿಎ ಸರಕಾರದ ಅವಧಿಯಲ್ಲಿದ್ದ 33 ಸಾವಿರ ಕೋಟಿ ರೂ. ನರೇಗಾ ಬಜೆಟ್ ಈಗ 86 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ದಿನಕ್ಕೆ 150ರೂ. ಕನಿಷ್ಟ ಕೂಲಿಯನ್ನು 370ರೂ.ಗೆ ಏರಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೇಂದ್ರದಿಂದ ನರೇಗಾ ಹಣ ಬಂದಿಲ್ಲ ಎಂಬ ಸಚಿವೆ ಹೆಬ್ಬಾಳ್ಕರ್ ಅವರ ಆರೋಪಕ್ಕೆ ಅವರು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯಿಸಿದರು. ಉಡುಪಿಗೆ 7.90 ಸಾವಿರ ಮಾನವ ದಿನಗಳ ಕೂಲಿ ನೀಡಿದೆ ಮತ್ತು 50.51 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು.
ವಸತಿ ಇಲಾಖೆ ಭೃಷ್ಟಾಚಾರ ಬಿ.ಆರ್.ಪಾಟೀಲ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜೀವ ಗಾಂಧಿ ವಸತಿ ನಿಗಮ ದೊಡ್ಡ ಭೃಷ್ಟಾಚಾರದ ಆರೋಪ ಹೊತ್ತಿದೆ. ಉಪ ಮುಖ್ಯಮಂತ್ರಿಗಳು ನಮ್ಮ ಸರಕಾರ ದಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದು ಖಂಡಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಕನ್ನಡಿಯಷ್ಟೇ ಸತ್ಯ. ತಕ್ಷಣ ಮುಖ್ಯಮಂತ್ರಿಗಳು ವಸತಿ ಮಂತ್ರಿಯ ರಾಜಿನಾಮೆ ಪಡೆಯಬೇಕು ಎಂದು ತಿಳಿಸಿದರು.





