ಡಾ.ಬಾಲಕೃಷ್ಣ ಎಸ್ ಮದ್ದೋಡಿಗೆ ಪ್ರಶಸ್ತಿ

ಉಡುಪಿ, ಜೂ.23: ಮಣಿಪಾಲ ಮಾಹೆ ಆಡಳಿತಕ್ಕೊಳಪಟ್ಟ ಎಂಐಟಿಯ ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರು ಪರಿಸರ ಶಿಕ್ಷಣ ಮತ್ತು ರಾಷ್ಟ್ರೀಯ ಸೇವಾ ಯೋಜ ನೆಯ ಚಟುವಟಿಕೆಗಳ ಅತ್ಯುತ್ತಮ ಕೆಲಸಕ್ಕಾಗಿ ಪ್ರತಿಷ್ಠಿತ ಇಂಡಿಯಾ ಪ್ರೈಮ್ ಐಕಾನ್ ಪ್ರಶಸ್ತಿ- 2025ನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಅಭಿವೃದ್ಧಿಯತ್ತ ರೂಪಿಸುವ ಜವಾಬ್ದಾರಿ, ವಿದ್ಯಾರ್ಥಿ ಗಳ ಸಬಲೀಕರಣ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವ ಸಾಧನೆಗಳಿಗಾಗಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಮದ್ದೋಡಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





