ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ

ಉಡುಪಿ, ಜೂ.23: ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ (ಕೆಎಂಎಎಸ್) ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಅವರು ಈ ಹಿಂದೆ ಹಾರೂಗೇರಿ ಪುರಸಭೆ, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಇಂಡಿ ಪುರಸಭೆ ಯಲ್ಲಿ ಮುಖ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಮಹಾಂತೇಶ ಅವರು, ಬಿಎಸ್ಸಿ(ಕೃಷಿ) ಪದವೀಧರರಾಗಿದ್ದಾರೆ. ಅವರು 2017ನೇ ಸಾಲಿನ ಕೆ.ಎ.ಎಸ್. ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ.
Next Story





