ಬಿಜೆಪಿಯಿಂದ ’ಬಲಿದಾನ ದಿವಸ್’ ಕಾರ್ಯಕ್ರಮ

ಉಡುಪಿ, ಜೂ.23: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶಾಮಪ್ರಸಾದ್ ಮುಖರ್ಜಿ ’ಬಲಿದಾನ ದಿವಸ್’ ಕಾರ್ಯಕ್ರಮ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸೋಮವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಪ್ರಮುಖರಾದ ಸತ್ಯಾನಂದ ನಾಯಕ್, ಶ್ರೀಕಾಂತ್ ನಾಯಕ್, ಗಿರೀಶ್ ಎಂ.ಅಂಚನ್, ದಿನೇಶ್ ಅಮೀನ್, ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ನಳಿನಿ ಪ್ರದೀಪ್ ರಾವ್, ಸಲೀಂ ಅಂಬಾಗಿಲು, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ವಿಜಯ್ ಭಟ್ ಕಡೆಕಾರ್, ಕಿಶೋರ್ ಕರಂಬಳ್ಳಿ, ಗುರುರಾಜ್, ಶ್ರೀವತ್ಸ, ನಿತಿನ್ ಪೈ, ಅರುಣ್ ಬಾಣ, ಗೋಪಾಲ್ ಕಾಂಚನ್, ಸದಾನಂದ ಪ್ರಭು ಉಪಸ್ಥಿತರಿದ್ದರು.





