ಉಡುಪಿ: ಆಹಾರ ಸುರಕ್ಷತೆ, ಗುಣಮಟ್ಟದ ಬಗ್ಗೆ ಅರಿವು

ಉಡುಪಿ, ಜೂ.28: ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಉಡುಪಿ ಹಾಗೂ ಕಟಪಾಡಿಯ ಹಲವು ಪ್ರದೇಶಗಳ ಬೀದಿ ಬದಿಯ ಟೀಸ್ಟಾಲ್, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಮೊಬೈಲ್ ಕ್ಯಾಂಟೀನ್ ಮತ್ತು ಮಹಿಳಾ ಹಸಿಮೀನು ಮಾರಾಟ ಮಳಿಗೆಗೆ ಭೇಟಿ ನೀಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಬೀದಿ ಬದಿಯಲ್ಲಿ 41 ಹಾಗೂ ಮಹಿಳಾ ಹಸಿ ಮೀನು ಮಾರಾಟ ಮಳಿಗೆಯಲ್ಲಿ 92 ಮಂದಿ ಸೇರಿದಂತೆ ಒಟ್ಟು 133 ವ್ಯಾಪಾರಿಗಳಿಗೆ ಆಹಾರ ಪರವಾನಿಗೆ/ ನೋಂದಾವಣೆಯನ್ನು ಉಚಿತವಾಗಿ ಮಾಡಿಕೊಡಲಾಯಿತು.
ಪ್ರಾಧಿಕಾರದ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ಹಾಗೂ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.
Next Story







