ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳವು

ಸಾಂದರ್ಭಿಕ ಚಿತ್ರ
ಕಾಪು, ಜೂ.28: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲಯದ ಚಿನ್ನಾಭರಣಗಳ ಪರ್ಸ್ ಕಳವಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಯಲಹಂಕದ ರಾಧಿಕಾ(66) ಎಂಬವರು ಮೇ 22ರಂದು ಯಶವಂತಪುರ ರೈಲು ನಿಲ್ದಾಣ ದಿಂದ ಉಡುಪಿಗೆ ತನ್ನ ಸಹೋದರ ಹರಿಪ್ರಸಾದ್ ಜೊತೆ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ಹರಿಪ್ರಸಾದ್ ಚಿನ್ನದ ಒಡವೆಗಳಿದ್ದ ಪರ್ಸನ್ನು ಬ್ಯಾಗಿನಲ್ಲಿ ಇಟ್ಟು, ಬಳಿಕ ಬ್ಯಾಗನ್ನು ತಲೆಯ ಪಕ್ಕದಲ್ಲಿ ಇಟ್ಟು ಮಲಗಿದ್ದರು. ಮೇ 23ರಂದು ಬೆಳಗ್ಗೆ ಎದ್ದು ನೋಡಿದಾಗ ಚಿನ್ನದ ಒಡವೆಗಳಿದ್ದ ಪರ್ಸ ಕಳವಾಗಿರುವುದು ಕಂಡುಬಂತು. ಕಳವಾದ ಪರ್ಸನಲ್ಲಿ ಒಟ್ಟು 170.4 ಗ್ರಾಂ ತೂಕದ 16,69,000 ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 3,000ರೂ. ನಗದು ಇತ್ತೆಂದು ದೂರ ಲಾಗಿದೆ.
Next Story





