ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಶಿರ್ವ, ಜೂ.28: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಜೂ.27ರಂದು ರಾತ್ರಿ ವೇಳೆ ಶಿರ್ವದಲ್ಲಿ ನಡೆದಿದೆ.
ಶಿರ್ವದ ಪವಿತ್ರ ಎಂಬವರ ಮನೆಯ ಅಡುಗೆ ಕೋಣೆಯ ಕಿಟಕಿಯ ಚಿಲಕವನ್ನು ಜಖಂ ಮಾಡಿ ಕಿಟಕಿ ಮೂಲಕ ಅಡುಗೆ ಕೋಣೆಯ ಬಾಗಿಲಿನ ಚಿಲಕವನ್ನು ತೆರೆದು ಒಳ ನುಗ್ಗಿದ ಕಳ್ಳರು, ರೂಮಿನ ಮರದ ಕಪಾಟಿನಲ್ಲಿದ್ದ 2,75,000ರೂ. ಮೌಲ್ಯದ ಕರಿಮಣಿ ಸರ 1,80,000ರೂ. ಮೌಲ್ಯದ ಎರಡು ಬಳೆ, 1,44,000ರೂ. ಮೌಲ್ಯದ ಪಕಳ ಸರ, 1,80,000ರೂ. ಮೌಲ್ಯದ ಮುತ್ತು ಸರ, 2.14ಲಕ್ಷ ರೂ. ಮೌಲ್ಯದ ಮೂರು ಜೊತೆ ಕಿವಿ ಓಲೆ, 1,80,000ರೂ. ಮೌಲ್ಯದ ಸರ, 48,000ರೂ. ಮೌಲ್ಯದ ಮೂರು ಉಂಗುರ, 18,000ರೂ. ಮೌಲ್ಯದ ಪೆಂಡೆಂಟ್ ಹಾಗೂ 36ಸಾವಿರ ರೂ. ಮೌಲ್ಯದ ಬ್ರಾಸ್ಲೈಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





