ಎಂ.ಕಾರ್ತಿಕ್‌ಗೆ ರೆಡ್‌ಕ್ರಾಸ್ ರಕ್ತದಾನ ರಾಜ್ಯ ಪುರಸ್ಕಾರ

ಉಡುಪಿ : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ನಡೆದ ರಾಜ್ಯ ಮಟ್ಟದ ರೆಡ್‌ಕ್ರಾಸ್ ದಿನಾಚರಣೆ ಮತ್ತು ಪುರಸ್ಕಾರ ಸಮಾರಂಭದಲ್ಲಿ ಮಣಿಪಾಲದ ದಂತ ವಿಜ್ಞಾನ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಕಾರ್ತಿಕ್ ಎಂ. ಇವರಿಗೆ ರಾಜ್ಯ ರೆಡ್‌ಕ್ರಾಸ್‌ನ ರಾಜ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
31 ವರ್ಷ ಪ್ರಾಯದ ಕಾರ್ತಿಕ್ ಅವರು ೫೭ ಬಾರಿ ರಕ್ತದಾನ ಮಾಡಿದ ಸಾಧನೆಯನ್ನು ಗುರುತಿಸಿ ಅವರನ್ನು ಗೌರಸಲಾಯಿತು. ಮುಖ್ಯ ಅತಿಥಿಗಳಾದ ಮೀನಾಕ್ಷಿ ಕೃಷ್ಣಬೈರೇಗೌಡ, ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ರೆಡ್‌ಕ್ರಾಸ್ ಉಪಾಧ್ಯಕ್ಷ ಭಾಸ್ಕರ್‌ರಾವ್, ಉಪಸಭಾಪತಿ ಶ್ರೀನಿವಾಸ ಹ್ಯಾಟಿ, ಕರ್ನಾಟಕ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





