ಮಣಿಪಾಲ: ಪುಸ್ತಕ ಮಾರಾಟದ ಹೆಸರಿನಲ್ಲಿ ವಂಚನೆ

ಮಣಿಪಾಲ, ಜೂ.29: ಆನ್‌ಲೈನ್ ಮೂಲಕ ಪುಸ್ತಕ ನೀಡುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿ ರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.22ರಂದು ಅಪರಿಚಿತ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ 25 ಪುಸ್ತಕಗಳನ್ನು ನೀಡುವುದಾಗಿ ಸುಳ್ಳು ಮಾಹಿತಿಯನ್ನು ನೀಡಿ, ಮಾನ್ಸಿ ಮಧುಪ್ ಸಿಂಗ್(33) ಎಂಬವರನ್ನು ನಂಬಿಸಿದ್ದು, ಅದರಂತೆ ಮಾನ್ಸಿ ತನ್ನ ಬ್ಯಾಂಕ್ ಖಾತೆಯಿಂದ 2 ಕಂತುಗಳಲ್ಲಿ 15000 ರೂ.ಗಳನ್ನು ಲಿಂಕ್‌ನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರು. ಯಾರೋ ಸೈಬರ್ ಕಳ್ಳರು ಮಾನ್ಸಿ ಅವರನ್ನು ನಂಬಿಸಿ ಒಟ್ಟು 30000ರೂ. ಹಣವನ್ನು ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





