ಕೋಳಿಅಂಕ: ಆರು ಮಂದಿ ಬಂಧನ

ಮಲ್ಪೆ, ಜೂ.30: ಕೋಳಿ ಅಂಕಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಲ್ಯಾಣಪುರ ಮೂಡುಬೆಟ್ಟು ಎಂಬಲ್ಲಿ ಜೂ.29ರಂದು ನಡೆದಿದೆ.
ಉದಯ ಕೆಮ್ಮಣ್ಣು, ಮಂಜುನಾಥ ಗರಡಿಮಜಲು, ಕಾರ್ತಿಕ್ ಕೊಡವೂರು, ಸುಕೇತ್ ಗರಡಿಮಜಲು, ಸಂದೇಶ ಲಕ್ಷ್ಮೀನಗರ, ಸುಜಿತ್ ಮೂಳೂರು ಬಂಧಿತ ಆರೋಪಿಗಳು. ಇವರಿಂದ ಕೋಳಿಯ ಕಾಲಿಗೆ ಕಟ್ಟಿದ ಬಾಳು, 860ರೂ. ನಗದು, ಒಂದು 1 ಜೀವಂತ ಹುಂಜ ಕೋಳಿ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





