ಉಡುಪಿ ಜಿಲ್ಲೆಯಲ್ಲಿ ಮಳೆ, ಮೂರು ಮನೆಗೆ ಹಾನಿ

ಉಡುಪಿ, ಜು.1: ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 20.4ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ ಅತ್ಯಧಿಕ 23.7ಮಿ.ಮೀ. ಮಳೆಯಾಗಿದೆ.
ದಿನದಲ್ಲಿ ಗಾಳಿ ಮಳೆಯಿಂದ ಮೂರು ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಬಂದಿದೆ. ಕುಂದಾಪುರ ಖಾರ್ವಿಕೇರಿಯ ಹಾಜಿರಾ ಎಂ.ಅಲಿ ಅವರ ವಾಸ್ತವ್ಯದ ಮನೆಯ ಮಾಡಿನ ಒಂದು ಬದಿ ಭಾರೀ ಮಳೆಗೆ ಕುಸಿದು ಹೋಗಿದೆ. ಇದರಿಂದ 20,000ರೂ.ಗಳಿಗೂ ನಷ್ಟದ ಅಂದಾಜು ಮಾಡಲಾಗಿದೆ.
ನಿನ್ನೆ ಸಂಜೆ ಬೀಸಿದ ಬಲವಾದ ಗಾಳಿಗೆ ತೆಕ್ಕಟ್ಟೆ ಗ್ರಾಮದ ಚಂದ್ರ ಎಂಬವರ ಮನೆಯ ಎದುರಿನ ಸಿಮೆಂಟ್ ಶೀಟುಗಳು ಹಾಗೂ ಮನೆಗೆ ಹೊಂದಿಕೊಂಡಿರುವ ಕಟ್ಟಡದ ಮಾಡು ಹಾರಿಹೋಗಿದ್ದು, 30ಸಾವಿರ ರೂ. ಗಳಿಗೂ ಅಧಿಕ ನಷ್ಟವಾಗಿರುವ ವರದಿ ಬಂದಿದೆ.
ಅಂಪಾರು ಗ್ರಾಮದ ಮೂಡುಬಗೆಯ ಶೀನಪ್ಪ ಶೆಟ್ಟಿ ಎಂಬವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 10 ಸಾವಿರ ರೂ. ಹಾಗೂ ಆಲೂರು ಗ್ರಾಮದ ಕೃಷ್ಣಪ್ಪ ಶೆಟ್ಟಿ ಅವರ ತೋಟದ ಅಡಿಕೆ ಬಬೆಳೆ ಹಾನಿಗೊಳಗಾಗಿದೆ. ಇದರಿಂದ 20ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.





