ಕೊಂಕಣ ರೈಲ್ವೆ ಮುಖ್ಯ ಪಿಆರ್‌ಓ ಆಗಿ ಸುನಿಲ್ ನಾರ್ಕರ್ ನಿಯುಕ್ತಿ

ಉಡುಪಿ, ಜು.1: ಕೊಂಕಣ ರೈಲ್ವೆ ಕಾರ್ಪೋರೇಷನ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸುನಿಲ್ ನಾರ್ಕರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
1997ರಲ್ಲಿ ಕೊಂಕಣ ರೈಲ್ವೆ ಸೇವೆಗೆ ಸೇರಿದ ಸುನಿಲ್ ನಾರ್ಕರ್ ಅವರು ಮೊದಲು ಕಮರ್ಷಿಯಲ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಬಳಿಕ ವಿವಿಧ ವಿಭಾಗಗಳಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದರು.
ರತ್ನಗಿರಿಯಲ್ಲಿ ಪ್ರಾದೇಶಿಕ ಟ್ರಾಫಿಕ್ ಮ್ಯಾನೇಜರ್, ಮಡಗಾಂವ್‌ನಲ್ಲಿ ಹಿರಿಯ ಪ್ರಾದೇಶಿಕ ಟ್ರಾಫಿಕ್ ಮ್ಯಾನೇಜರ್ ಆಗಿದ್ದು, ಬಳಿಕ ಬೇಲಾಪುರದ ಕಾರ್ಪೋರೇಟ್ ಕಚೇರಿಲ್ಲಿ ಉಪಮುಖ್ಯ ಕಮರ್ಷಿಯಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದು, ಇದೀಗ ಸಿಪಿಆರ್‌ಓ ಆಗಿ ಬಡ್ತಿ ಪಡೆದಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story





