ವಿದ್ಯಾರ್ಥಿವೇತನ ಸಮಸ್ಯೆ ಬಗೆಹರಿಸುವಂತೆ ಉಡುಪಿ ಡಿಸಿಗೆ ಮನವಿ

ಉಡುಪಿ: ಎಸ್‌ಐಓ ವಿದ್ಯಾರ್ಥಿ ಸಂಘಟನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ರದ್ದುಪಡಿಸಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಲಭ್ಯವಿದ್ದ ಈ ವೇತನವನ್ನು ಇದೀಗ ರದ್ದು ಪಡಿಸಲಾಗಿದ್ದು, ಪ್ರಸ್ತುತ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಕೇವಲ 8ನೇ ತರಗತಿವರೆಗೆ ಮಾತ್ರ ಸಹಾಯಧನ ನೀಡುತ್ತಿದೆ. ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಶಾಲೆ ಬಿಡು ವಂತಹ ದುರಂತಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಆದುದರಿಂದ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ್ನು 9ನೇ ಮತ್ತು 10ನೇ ತರಗತಿಯವರೆಗೆ ವಿಸ್ತರಿಸು ವಂತೆ ಹಾಗೂ ಈ ಸಮಸ್ಯೆಯನ್ನು ತಕ್ಷಣದ ಮಟ್ಟಿಗೆ ಗಮನಿಸಿ ಪರಿಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ಈ ಸಂಧರ್ಭದಲ್ಲಿ ಎಸ್‌ಐಓ ಉಡುಪಿಯ ಜಿಲ್ಲಾ ಕಾರ್ಯದರ್ಶಿಗಳಾದ ಸಮೀರ್ ತೀರ್ಥಹಳ್ಳಿ , ಸಫಾನ್ , ಅದ್ನಾನ್ , ನಿಹಾಲ್ , ನಿಫಾಲ್ ಮತ್ತು ಸದಸ್ಯರಾದ ಅಯಾನ್ ಮಲ್ಪೆ, ಅಸೀಮ್, ರಿಯಾನ್ ನಕ್ವಾ ಉಪಸ್ಥಿತರಿದ್ದರು.





