ಹೈಕಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕುಂದಾಪುರ, ಜು.2: ಹೈಕಾಡಿ ಜಾಮಿಯಾ ಮಸೀದಿ ಟ್ರಸ್ಟ್ ಆಶ್ರಯದಲ್ಲಿ ಹೈಕಾಡಿ ಫ್ರೌಢ ಶಾಲೆಯ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಉದ್ಯಮಿ ಅನ್ಸಾರ್ ಟಿ.ಎಸ್. ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆವರ್ಸೆ ಗ್ರಾಪಂ ನೂತನ ಅಧ್ಯಕ್ಷ ದಿವಾಕರ್ ಗಾಣಿಗ ಹಾಗೂ ಉಪಾಧ್ಯಕ್ಷೆ ಸಮೀನಾ ಭಾನು ಅವರನ್ನು ಸನ್ಮಾನಿಸ ಲಾಯಿತು. ಅಧ್ಯಕ್ಷತೆಯನ್ನು ಹೈಕಾಡಿ ಮಸೀದಿಯ ಅಧ್ಯಕ್ಷ ಅಸ್ಲಾಂ ಹೈಕಾಡಿ ವಹಿಸಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯೆ ವಿಜಯಲಕ್ಷ್ಮಿ ಶೆಟ್ಟಿ, ಮಸೀದಿಯ ಉಪಾಧ್ಯಕ್ಷ ರಾದ ಅಬ್ದುಲ್ ಸಮದ್, ಖಾಜಿ ಶಬ್ಬೀರ್, ಕಾರ್ಯದರ್ಶಿ ಜಾಫರ್ ಸಾದಿಕ್, ಖಜಾಂಜಿ ಮನ್ಸೂರ್ ಸಾಹೇಬ್, ಮಸೀದಿಯ ಇಮಾಮ್ ಮುನೀಫ್ ಮುಂತಾದವರು ಉಪಸ್ಥಿತರಿದ್ದರು. ಜಹೀರ್ ಅಬ್ಬಾಸ್ ಹಾಗೂ ಅಸೀಫ್ ಕಾರ್ಯಕ್ರಮ ನಿರ್ವಹಿಸಿದರು. ಎಂ.ಆರ್.ಹೈಕಾಡಿ ವಂದಿಸಿದರು.
Next Story





