ಕಲೆಯಿಂದ ನಟನೆ, ನಿಜದ ಡಬಲ್ ವಿಷನ್ ಸಾಧಿಸಲು ಸಾಧ್ಯ: ತೋಳ್ಪಾಡಿ
ಶತಾವಧಾನಿ ಡಾ.ಆರ್.ಗಣೇಶ್‌ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

ಉಡುಪಿ, ಜು.4: ನಟನೆ ಮತ್ತು ನಿಜ ಎರಡು ಕೂಡ ಏಕಾಕಾಲದಲ್ಲಿ ಒಂದಾಗುವ ಡಬಲ್ ವಿಷನ್‌ನ್ನು ಸಾಧಿಸಲು ತೋರಿಸಿರುವುದು ಭಾರತೀಯ ಕಾಣಿಕೆಯಾಗಿದೆ ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಯಕ್ಷಗಾನ ಕಲಾರಂಗ ವತಿಯಿಂದ ಉಡುಪಿ ಕಲಾರಂಗದ ಐವೈಸಿ ಸಭಾಭವನದಲ್ಲಿ ಶುಕ್ರವಾರ ನಡೆದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜೀವನ್ಮರಣ ಪ್ರಶ್ನೆಗೆ ಒಳಗಾದ ನಿಜವಾದ ಸಾಮರ್ಥ್ಯ ಪ್ರಕಟವಾಗುತ್ತದೆ. ಇದನ್ನು ಸಾಧಿಸಬೇಕೆಂಬುದು ಭಾರತೀಯ ಪ್ರಾಚೀನ ಮನಸ್ಸಿನ ಗುಣ. ಇದು ಸಾಧಿಸಪೇಕಾಗಿದೆ. ನಟನೆಯೂ ಹೌದು ಮತ್ತು ಸತ್ಯವೂ ಹೌದು. ನಟನೆಯೇ ನಿಜ, ನಿಜವೇ ನಟ ಆಗಬೇಕು. ಇದು ಏಕಾಗ್ರತೆಯಲ್ಲಿ ಸಾಧಿಸಲು ಕಲೆಯಲ್ಲಿ ಸಾಧ್ಯ. ಆರ್ತತೆ ಭಾವ ತೀವ್ರತೆ ಕಡಿಮೆಯಾಗಂತೆ ನೋಡಿಕೊಳ್ಳುವುದು ಕಲೆಗೆ ದೊಡ್ಡ ಸವಾಲು. ಅದು ಜೀವನದ ಸಾವಲು ಕೂಡ ಆಗಿದೆ ಎಂದರು.
ಯಕ್ಷಗಾನ ಸಂಗೀತದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅದಕ್ಕೆ ಗಾಬರಿ ಪಡ ಬೇಕಾಗಿಲ್ಲ. ಪ್ರಶ್ನೆಗಳು ಹುಟ್ಟಿ ಕೊಂಡಾಗ ನಿಜವಾದ ಯೋಚನೆ, ಪ್ರತಿಭೆಗಳು, ಆಲೋಚನಾ ಲಹರಿಗಳು, ವಿಷಯದ ಆಳ ಮತ್ತು ವಿಸ್ತಾರ ಪ್ರಕಟವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಬಹುಭಾಷಾ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಆರ್.ಗಣೇಶ್, ಇಂದು ಪರಂಪರೆ ಮತ್ತು ಆಧುನಿಕತೆಯನ್ನು ಉಳಿಸಿಕೊಳ್ಳುವ ದೊಡ್ಡ ಸಂದಿಗ್ಘತೆ ಯಲ್ಲಿ ಈ ಜಗತ್ತು ಇದೆ. ಕೆಲವರಿಗೆ ಇದರ ಬಗ್ಗೆ ಚಿಂತೆಯೇ ಇಲ್ಲ. ಇದನ್ನೆಲ್ಲ ಉಳಿಸಿಕೊಂಡು ನಾವು ಬಾಳಬೇಕಾಗಿದೆ. ಈ ಪರಂಪರೆಯನ್ನು ಕಾಪಾಡಲು ಸಂಕ್ಷಿಪ್ತವಾದ ಮಾದರಿ ಅಂದರೆ ಕಲೆಯಾಗಿದೆ ಎಂದರು.
ಕಲೆ ಈಗಿನ ಜಗತ್ತಿನಂತೆ ಒಮ್ಮೇಲೆ ಬದಲಾಗುವುದಿಲ್ಲ. ಅದರಲ್ಲಿನ ಮಾರ್ಪಡು ತುಂಬಾ ಜೀರ್ಣಿಸಿಕೊ ಳ್ಳುತ್ತದೆ. ಅಭಿಜಾತ ಕಲೆಯಾಗಿರುವ ಯಕ್ಷಗಾನವು ತನ್ನನ್ನು ಸುಲಭ ರೂಪಕ್ಕೆ ಬದಲಾಯಿಸಿಕೊಳ್ಳು ವುದಿಲ್ಲ. ಇಂದಿನ ಭಾರತ ಕೂಡ ಯಾವ ರೀತಿ ಬಾಳ ಬೇಕು ಮತ್ತು ಹೊಸತನ ಯಾವ ರೀತಿ ಸ್ವೀಕರಿಸ ಬೇಕು ಎಂಬುದನ್ನು ನಮಗೆ ಈ ಕಲೆ ತೋರಿಸುತ್ತದೆ. ಅದಕ್ಕೆ ಯಕ್ಷಗಾನದಂತಹ ಕಲೆಯೂ ಮಾರ್ಗದರ್ಶಿಯಾಗುತ್ತಿದೆ ಎಂದು ಅವರು ತಿಳಿಸಿದರು.
ಅವಧಾನಿ ವಿದ್ವಾನ್ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ವಿಶ್ವಸ್ಥ ಗಿರಿಜಾ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಯುವ ಕಲಾವಿದರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ಸನಿವಾಸ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಜರಗಿತು. ಶಿಬಿರದ ನಿರ್ದೇಶಕ ಪವನ್ ಕಿರಣ್‌ಕೆರೆ ಉಪಸ್ಥಿತರಿದ್ದರು. ಶಿಬಿರಾರ್ಥಿ ಶಶಿಕಾಂತ್ ಶೆಟ್ಟಿ ಕಾರ್ಕಳ ಹಾಗೂ ಸುನೀಲ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.







