ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಉಡುಪಿ ಜಿಲ್ಲೆಯಾದ್ಯಂತ ಮಾನವ ಸರಪಳಿ

ಉಡುಪಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನೀಡಿರುವ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರದ ಜುಮ್ಮಾ ನಮಾಝಿನ ಬಳಿಕ ಆಯಾ ಮಸೀದಿ ವ್ಯಾಪ್ತಿಯಲ್ಲಿ ಮಾನವ ಸರಪಳಿ ನಡೆಸಲಾಯಿತು.
ಉಡುಪಿ ಜಾಮೀಯ ಮಸೀದಿ ಹಾಗೂ ಸಿಟಿ ಬಸ್ ನಿಲ್ದಾಣದ ಅಂಜು ಮಾನ್ ಮಸೀದಿಯ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರದ ತಿದ್ದುಪಡಿ ಕಾಯಿದೆಯನ್ನು ವಿರೋಧಿ ಸಲಾಯಿತು. ಇದೇ ಸಂದರ್ಭದಲ್ಲಿ ಫಲಕಗಳನ್ನು ಪ್ರದರ್ಶಿಸಿ ಕೂಡಲೇ ವಕ್ಫ್ ತಿದ್ದುಪಡಿ ಕಾಯಿದೆ ಕೈಬಿಡುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್, ಜಾಮೀಯ ಮಸೀದಿಯ ಅಧ್ಯಕ್ಷ ರಿಯಾಝ್ ಅಹ್ಮದ್, ಕಾರ್ಯದರ್ಶಿ ಖಾಲಿದ್, ಮೌಲಾನ ಅಬ್ದುರ‌್ರಶೀದ್ ಉಮ್ರಿ, ಎಸ್‌ಡಿಪಿಐ ಮುಖಂಡರಾದ ಶಾಹಿದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಅದೇ ರೀತಿ ಬ್ರಹ್ಮಗಿರಿ ನಾಯಕ್‌ಕೆರೆ ಹಾಶಿಮಿ ಮಸೀದಿ, ಕೊಳಂಬೆ ಮದೀನ, ಮಲ್ಪೆ, ನೇಜಾರು, ಹೂಡೆ ಹಾಗೂ ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಬೈಂದೂರು, ಕಾಪು ತಾಲೂಕಿನಾದ್ಯಂತ ವಿವಿಧ ಮಸೀದಿ ಗಳಲ್ಲಿ ಜುಮಾ ನಮಾಝ್ ಬಳಿಕ ಹೊರಗೆ ರಸ್ತೆಯಲ್ಲಿ ಮಾನವ ಸರಳಪಳಿಯನ್ನು ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಲಾಯಿತು. ಇದೇ ಸಂದರ್ಭ ಮತಪತ್ರಗಳನ್ನು ಪ್ರದರ್ಶಿಸಲಾಯಿತು.







