ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಬೆರೆಯಬೇಕು: ಪ್ರಸಾದ್ ಬೈಂದೂರು

ಕುಂದಾಪುರ, ಜು.5: ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ಎಳೆ ವಯಸ್ಸಿನಲ್ಲೇ ಮೂಡಬೇಕು. ಆಗ ಪರಿಸರ ಉಳಿಯಲು ಸಾಧ್ಯ ಎಂದು ಪರಿಸರವಾದಿ ಪ್ರಸಾದ್ ಬೈಂದೂರು ಹೇಳಿದ್ದಾರೆ.
ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ಆಶ್ರಯದಲ್ಲಿ ಗೆಳೆಯರ ಬಳಗ ಕಾರ್ಕಡ, ನಿಸರ್ಗ ಇಕೋ ಕ್ಲಬ್ ಕೋಟೇಶ್ವರ ಸಹಯೋಗ ದೊಂದಿಗೆ ಹಳವಳ್ಳಿ ಕುಂಬ್ರಿ ಹೊಸ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಲಾದ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಕುಂದಾಪುರ ಸೇವಾ ಸಂಗಮ ಶಿಶು ಮಂದಿರದ ವಿಶ್ವಸ್ಥ ಮಂಡಳಿಯ ಪ್ರಮುಖ ಚಂದ್ರಿಕಾ ಚಂದ್ರಮೋಹನ್ ಧನ್ಯ ಉದ್ಘಾಟಿಸಿದರು. ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪರಿಸರ ಜಾಗೃತಿಯ ಪ್ರತಿಜ್ಞಾ ವಿಧಿ ಬೋದಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಕೆ,ಕೋಟೇಶ್ವರ ಗ್ರಾಮಪಂಚಾಯತ್ ಸದಸ್ಯೆ ಆಶಾ ಉಪಸ್ಥಿತರಿದ್ದರು. ಸಂಘದ ಶಿಸ್ತು ಸಮಿತಿ ಅಧ್ಯಕ್ಷ ಅಜಿತ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಹ ಶಿಕ್ಷಕಿ ಕಮಲ.ಟಿ.ವಿ ವಂದಿಸಿದರು. ಪಂಚವರ್ಣದ ಸದಸ್ಯ ಮಹೇಶ್ ಹವಲ್ದಾರ್ ಬೆಳಗಾವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಅನಂತಯ್ಯ ನಾವಡ, ಅಶೋಕ್ ಸಹಕರಿಸಿದರು.