ಪರಿಶಿಷ್ಟ ಪಂಗಡದವರ ಹೊಸ ಮನೆಗಳ ನಿರ್ಮಾಣ ಕಾಮಗಾರಿ ಪರಿಶೀಲನೆ

ಕುಂದಾಪುರ, ಜು.6: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಗ್ರಾಪಂನ ಚಿಟ್ಟಿಬೆಟ್ಟು ಪರಿಸರದಲ್ಲಿ ಪರಿಶಿಷ್ಟ ಪಂಗಡದ 8 ಹೊಸ ಮನೆ ನಿರ್ಮಾಣದ ಕಾಮಗಾರಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಪರಿಶೀಲನೆ ನಡೆಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕರು, ಕೊರಗ ಸಮುದಾಯದವರು ಅತ್ಯಂತ ಮುಗ್ಧ ಜನಾಂಗದವರು. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೋಟತಟ್ಟು ಗ್ರಾಪಂನ ಮುತುವರ್ಜಿಯಿಂದ ಕರ್ಣಾಟಕ ಬ್ಯಾಂಕಿನವರ ಸಹಕಾರದೊಂದಿಗೆ ಹಾಗೂ ಈ ಭಾಗದ ದಾನಿಗಳ ಮೂಲಕ ಒಂದು ಉತ್ತಮ ಸೌಲಭ್ಯವುಳ್ಳ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉಡುಪಿ ಜಿಲ್ಲಾ ಕರ್ನಾಟಕ ಬ್ಯಾಂಕ್ ಅಸಿಸ್ಟೆಂಟ್ ಮೆನೇಜರ್ ವಾದಿರಾಜ್ ಭಟ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಕೊರಗ ಸಮುದಾಯದ ಮುಖಂಡ ಗಣೇಶ್ ಹಾಗೂ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.