ಉಚಿತ ಇಸ್ಲಾಮಿಕ್ ಇ ಬುಕ್ ಆವೃತ್ತಿ ಲೋಕಾರ್ಪಣೆ

ಉಡುಪಿ: ಲೇಖಕ, ಅನುವಾದಕ ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ ಬರೆದ ಪುಸ್ತಕಗಳ ಉಚಿತ ಇ ಬುಕ್ ಆವೃತ್ತಿ www.twaha.in ಇಸ್ಲಾಮಿಕ್ ಡಿಜಿಟಲ್ ಲೈಬ್ರರಿ ವೆಬ್‌ಸೈಟ್ ಲೋಕಾರ್ಪಣೆಗೊಂಡಿತು.
ರಂಗಿನಕೆರೆ ಮಾಲಿಕ್ ಬಿನ್ ದೀನಾರ್ ದಅ್’ವಾ ದರ್ಸ್ ಚೇಯರ್‌ಮಾನ್ ಸಯ್ಯಿದ್ ಇಬ್ರಾಹೀಮ್ ಜುನೈದ್ ಅರ್ರಿಫಾಯೀ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಲೇಖಕ ಎಂ.ಎ.ಇಸ್ಮಾಈಲ್ ನಈಮಿ ಮಂಗಳ ಪೇಟೆ ವೆಬ್‌ಸೈಟ್ ಕುರಿತು ಪರಿಚಯಿಸಿದರು.
ರಂಗಿನಕೆರೆ ಮಾಲಿಕ್ ಬಿನ್ ದೀನಾರ್ ದಅ್‌ವಾ ದರ್ಸ್ ಮುದರ್ರಿಸ್ ಆಶಿಖ್ ಸಖಾಫಿ ಎಚ್. ಕಲ್ಲು, ಪ್ರಾಧ್ಯಾಪಕ ಅಬ್ದುಲ್ ನಾಸಿರ್ ಸಖಾಫಿ ಸಕಲೇಶಪುರ, ಹೂಡೆ ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಜುನೈದ್ ಹೂಡೆ, ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಶೇಕ್ ಝುಲ್ಫಿಕರ್ ಅಹ್ಮದ್ ಹೂಡೆ, ಜೊತೆ ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್ ಹೂಡೆ, ದಾರುಸ್ಸಲಾಮ್ ಮದ್ರಸಾ ಪ್ರಾಧ್ಯಾಪಕ ಇಸ್ಮಾಈಲ್ ರಝ್ವಿ ಹೂಡೆ ಮುಂತಾದವರು ಉಪಸ್ಥಿತರಿದ್ದರು.
Next Story