ಉಡುಪಿ: ರೆಡ್‌ಕ್ರಾಸ್‌ನಿಂದ ಉಚಿತ ಕನ್ನಡಕ ವಿತರಣೆ

ಉಡುಪಿ: ನಾವು ಜಗತ್ತನ್ನು ಕಾಣಲು ಸಾಧ್ಯವಿರುವ ಕಣ್ಣು ನಮ್ಮ ದೇಹದ ಪ್ರಮುಖ ಆಸ್ತಿ. ಅದರ ಸಂರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳುವ ಸೇವಾ ಕಾರ್ಯಗಳು ಶ್ಲಾಘನೀಯ. ಈ ದೃಷ್ಟಿಯಿಂದ ರೆಡ್‌ಕ್ರಾಸ್ ನಡೆಸುವ ನೇತ್ರ ಚಿಕಿತ್ಸಾ ಶಿಬಿರಗಳು ಉಪಯುಕ್ತವಾಗಿವೆ ಎಂದು ಲಯನ್ಸ್ 317ರ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಹಾಗೂ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಉಡುಪಿ ಜಿಲ್ಲಾ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಿ ಅವರು ಮಾತನಾಡುತ್ತಿದ್ದರು.
ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ವಿ.ಜಿ.ಶೆಟ್ಟಿ, ಲಯನ್ಸ್ ಮಿಡ್‌ಟೌನ್ ಉಡುಪಿಯ ಅಧ್ಯಕ್ಷ ಪುರುಷೋತ್ತಮ ನಾಯಕ್, ಖಜಾಂಚಿ ಸುಬ್ರಹ್ಮಣ್ಯ ಶೇರಿಗಾರ್ ಜಿಲ್ಲಾ ಡ್ರಗ್ಗಿಸ್ಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಗುರುಕೃಪಾ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಖಚಾಂಚಿ ರಮಾದೇವಿ ವಂದಿಸಿದರು.





