ಡ್ರಗ್ಸ್‌ನಿಂದ ಜೀವನ, ವೃತ್ತಿ, ಕುಟುಂಬ ಹಾಳು: ಎಸ್ಪಿ ಹರಿರಾಂ ಶಂಕರ್

ಉಡುಪಿ, ಜು.9: ಕುತೂಹಲದಿಂದ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಅದು ಜೀವನ, ವೃತ್ತಿ ಮತ್ತು ಕುಟುಂಬಗಳನ್ನು ಹಾಳು ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್‌ನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವೈದ್ಯಕೀಯ ಅಧೀಕ್ಷಕ ಡಾ.ನಾಗಾರಾಜ ಎಸ್., ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ., ಸ್ನಾತಕ ವಿಭಾಗದ ಡೀನ್ ಡಾ.ಪೃಥ್ವಿರಾಜ್ ಪುರಾಣಿಕ್, ಆಡಳಿತ ವಿಭಾಗ ಅಸೋಸಿಯೇಟ್ ಡೀನ್ ಡಾ.ಚೈತ್ರ, ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಯಘ್ನೇಶ್ ದರ್ಭಾರ್ ಮತ್ತು ಡಾ. ದೀಕ್ಷಾಜೋಗಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಹೊಸದಾಗಿ ನೇಮಿಸಲಾದ ವಿದ್ಯಾರ್ಥಿ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು. ಪರಿಷತ್ತಿನ ಪದಾಧಿಕಾರಿಗಳ ಹೆಸರನ್ನು ಡಾ.ಪ್ರಥ್ವಿರಾಜ್ ಪುರಾಣಿಕ್ ಮತ್ತು ಡಾ.ಶ್ರೀಕಾಂತ್ ಪಿ. ಘೋಷಿಸಿದರು. ಡಾ.ಚೈತ್ರ ಪ್ರಮಾಣವಚನ ಬೋಧಿಸಿದರು.
ಮಾಜಿ ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಗುರುಗೋವಿಂದ್ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಹೊಸ ಅಧ್ಯಕ್ಷ ಶಿವಲಿಂಗಪ್ಪಮತ್ತು ಕಾರ್ಯದರ್ಶಿ ಧನ್ಯತಾ ಎನ್. ಅವರಿಗೆ ಹಸ್ತಾಂತರಿಸಿದರು.
ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಶಿವಲಿಂಗಪ್ಪಸ್ವಾಗತಿಸಿದರು. ಧನ್ಯತಾ ಎನ್. ವಂದಿಸಿದರು. ಮಾನಸಿ ಡಿ.ಜೀರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ವನ್ನು ಸಹಾಯಕ ಪ್ರಾಧ್ಯಾಪಕ ಡಾ.ಪುನೀತ್ ಪಿ. ಸಂಯೋಜಿಸಿದರು.







