ಉಡುಪಿ ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು

ಉಡುಪಿ, ಜು.12: ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು, ಕಳೆದ ರಾತ್ರಿಯ ಬಳಿಕ ಮತ್ತೆ ಚುರುಕುಗೊಂಡಿದೆ. ಇಂದು ದಿನವಿಡೀ ಜಿಲ್ಲೆಯಾದ್ಯಂತ ಬಿರುಸಿನ ಮಳೆಯಾಗುತ್ತಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 80.8ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 97.1ಮಿ.ಮೀ. ಮಳೆಯಾದರೆ ಬ್ರಹ್ಮಾವರದಲ್ಲಿ 90.7ಮಿ.ಮೀ. ಮಳೆ ಬಿದ್ದಿದೆ. ಕುಂದಾಪುದಲ್ಲಿ 89.5ಮಿ.ಮೀ. ಮಳೆಯಾದ ವರದಿ ಬಂದಿದೆ.
ಆದರೆ ದಿನದಲ್ಲಿ ಯಾವುದೇ ಹಾನಿಯ ಪ್ರಕರಣ ವರದಿಯಾಗಿಲ್ಲ. ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Next Story





