ಶೀರೂರು ಪರ್ಯಾಯ ಸ್ವಾಗತ ಕಚೇರಿ ಉದ್ಘಾಟನೆ

ಉಡುಪಿ, ಜು.13: ಮುಂಬರುವ ಶೀರೂರು ಪರ್ಯಾಯದ ಸ್ವಾಗತ ಸಮಿತಿ ಕಚೇರಿಯನ್ನು ಇಂದು ರಥಬೀದಿಯಲ್ಲಿರುವ ಶೀರೂರು ಮಠದ ಆವರಣದಲ್ಲಿ ಇಂದು ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಶೀರೂರು ಮಠದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀವೇದವರ್ಧನ ತೀರ್ಥ ಶ್ರೀಪಾದರು, ಇಂದು ಕಟ್ಟಿಗೆ ಮುಹೂರ್ತ ಯಶಸ್ಲಿಯಾಗಿ ನಡೆದಿದೆ.ಮುಂದೆ ನಡೆಯುವ ಪರ್ಯಾ ಯಕ್ಕೂ ಭಕ್ತಾದಿಗಳು ಇದೇ ರೀತಿ ಉತ್ಸಾಹ ತೋರಿ ಅದನ್ನು ಯಶಸ್ವಿಗೊಳಿಸಬೇಕು. ಮುಂದಿನ ಪರ್ಯಾಯ ಭಕ್ತರ ಪರ್ಯಾಯವಾಗಿರುತ್ತದೆ ಎಂದರು.
ಸ್ವಾಗತ ಸಮಿತಿ ಘೋಷಣೆ: ಇದೇ ವೇಳೆ ಶೀರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳ ತ್ತಾಯ, ಪರ್ಯಾಯದ ಆಯೋಜನೆಗಾಗಿ ಸ್ವಾಗತ ಸಮಿತಿಯನ್ನು ಘೋಷಿಸಿದರು. ಸಮಿತಿಯ ಗೌರವಾಧ್ಯಕ್ಷರಾಗಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರನ್ನು ನೇಮಿಸಲಾಯಿತು.ಅಧ್ಯಕ್ಷರಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾರ್ಯಾಧ್ಯಕ್ಷರಾಗಿ ಕಟೀಲು ದೇವಳದ ಅರ್ಚಕರಾದ ಗೋಪಾಕೃಷ್ಣ ಅಸ್ರಣ್ಣ, ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಹಾಗೂ ಮಣಿಪಾಲದ ಉದ್ಯಮಿ ಡಾ.ಟಿ.ರಂಜನ್ ಪೈ, ಪ್ರಧಾನ ಕಾರ್ಯದರ್ಶಿಗಳಾಗಿ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ನಿಯುಕ್ತಿಗೊಳಿ ಸಲಾಯಿತು.







